ನಿನ್ನೆ ರಾತ್ರಿ 9 ಗಂಟೆಗೆ ಏಕಾಏಕಿ ಶುರುವಾದ ಜೋರು ಮಳೆ ಸತತ ಒಂದೂವರೆ ಗಂಟೆಗಳ ಕಾಲ ಬಿಟ್ಟು ಬಿಡದೇ ಅಬ್ಬರಿಸಿತ್ತು. ಬಳಿಕ ಕೊಂಚ ಅಬ್ಬರವನ್ನ ಕಡಿಮೆ ಮಾಡಿಕೊಂಡಮಳೆರಾಯ ರಾತ್ರಿ ಇಡೀ ಸೋನೆ ಮಳೆಯಾಗಿ, ಆಗಾಗ ಜೋರಾಗಿ ಅಬ್ಬರಿಸಿತ್ತು.ಮಳೆ ಬರೋದಕ್ಕೆ ಶುರುವಾಗುತ್ತಿದ್ದಂತೆಯೇ ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಪದ್ಮನಾಭನಗರ, ಹಬ್ಬಾಳ, ಸಂಪಗಿರಾಮನಗರ, ಗೊರಗುಂಟೆ ಪಾಳ್ಯ, ಆರ್ ಎಂವಿ ಲೇಔಟ್, ಸಹಕಾರ ನಗರ,ಶಾಂತಿನಗರ ಬೊಮ್ಮಸಂದ್ರ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿತ್ತು. ಬಿಬಿಎಂಪಿಸಿಬ್ಬಂದಿಗಳು ನೀರು ಹೊರ ಹಾಕಲು ಮೋಟರ್ ಗಳನ್ನ ಬಳಿಸಿ ನೀರಿನ್ನ ಹೊರ ಹಾಕಲು ಪ್ರಯತ್ನ ಪಡುತ್ತಿದ್ದರೆ ಮನೆಯವರು ಅಯ್ಯೋ ಇದೇನಲ್ಲ ಕರ್ಮ ನಮಗೆ ಅಂತಾ ಮಳೆ ನೀರಿನ ಜೊತೆಗೆ ಮೋರಿ ನೀರನ್ನ ಮನೆಯಿಂದಹೊರ ಹಾಕಲು ಹರಸಾಹಸ ಪಡುತ್ತಿದ್ದರು.ಇನ್ನೂ ಮಳೆಯಿಂದ ಬೆಂಗಳೂರಿನ ಬಹುತೇಕ ರಸ್ತೆಗಳು ಕೆರೆಗಳಂತೆ ಆಗಿದ್ದು, ಇಷ್ಟು ದಿನ ಮಳೆ ಬಂದರೆ ಸಾಕು ಅನ್ನುತಿದ್ದ ಜನ ಈಗ ಬಂದಂತಹ ಒಂದೇ ಒಂದು ಮಳೆಗೆ ಕೈ ಮುಗಿತಿದ್ದಾರೆ.ಒಂದೇ ಒಂದು ಮಳೆಗೆ ನಮ್ಮ ಪರಿಸ್ಥಿತಿ ಈ ತರಹ ಆದರೆ ಇನ್ಮುಂದೆ ನಮ್ಮ ಕತೆ ಏನು? ಪ್ರತೀ ದಿನ ಮಳೆ ಬಂದರೆ ಏನಪ್ಪ ಮಾಡೋದು ಅಂತ ತಲೆ ಮೇಲೆ ಕೈ ಹೊತ್ತಿದ್ದಾರೆ. ಪ್ರತಿಬಾರಿ ಮಳೆ ಬಂದಾಗಲೂ ನಾವು ಫುಲ್ ರೆಡಿ ಅನ್ನೋ ಬಿಬಿಎಂಪಿಮಾತ್ರ ಮತ್ತೇದೇ ಹಳೆಯ ಚಾಳಿಯಂತೆ ಬೆಂಗಳೂರಿನ ಮಾನ ಹೋಗುವಂತೆ ಮಾಡುತ್ತಿದ್ದಾರೆ.