ಪ್ರಧಾನಿಯಾದ 9 ವರ್ಷಗಳ ಬಳಿಕ ಅಮೆರಿಕಕ್ಕೆ ಮೊದಲ ಅಧಿಕೃತ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಶ್ವದ ದೊಡ್ಡಣ್ಣ’ ಖ್ಯಾತಿಯ ದೇಶದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ಜೂನ್21ರಂದು ಮೋದಿ ಅವರು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಅವರು ಅಮೆರಿಕ ಅಧ್ಯಕ್ಷರ ಆತಿಥ್ಯ ಸ್ವೀಕರಿಸಲಿದ್ದಾರೆ. ಮರುದಿನ ಅಂದರೆ ಜೂನ್22ರಂದು ಶ್ವೇತಭವನದಲ್ಲಿ ಅವರಿಗೆ 21 ಕುಶಾಲತೋಪು ಸಿಡಿಸಿ ಅಧಿಕೃತವಾಗಿ ಬರಮಾಡಿಕೊಳ್ಳಲಾಗುತ್ತದೆ. ಶ್ವೇತಭವನದ ಹುಲ್ಲು ಹಾಸಿನ ಮೇಲೆ ನಡೆಯುವ ಈ ವೈಭವದ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಅಮೆರಿಕದ ವಿವಿಧೆಡೆ ನೆಲೆಸಿರುವ ಭಾರತೀಯರು ವಾಷಿಂಗ್ಟನ್‌ನತ್ತ ದೌಡಾಯಿಸಲು ಮುಂದಾಗಿದ್ದಾರೆ. ಇದರಿಂದಾಗಿ ವಾಷಿಂಗ್ಟನ್‌ನತ್ತ ತೆರಳುವ ವಿಮಾನಗಳು ಹಾಗೂ ಅಲ್ಲಿನ ಹೋಟೆಲ್‌ಕೋಣೆಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿ ದರ ಹೆಚ್ಚಳವಾಗಿದೆ. ಭಾರತೀಯ ಸಂಘಟನೆಗಳ ಒಕ್ಕೂಟಗಳು ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿಯಿಂದ ಜೂನ್ 22ರ ಬೆಳ್ಳಂಬೆಳಗ್ಗೆಯಿಂದಲೇ ಬಸ್‌ಗಳಿಗೆ ವ್ಯವಸ್ಥೆ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ದಂಪತಿ ನಿರ್ಧರಿಸಿದ್ದಾರೆ. ಮೋದಿ ಅವರು ಅಮೆರಿಕಕ್ಕೆ ಬಂದಿಳಿಯುವ ದಿನವೇ ಶ್ವೇತಭವನದಲ್ಲಿ ಬೈಡೆನ್‌ಜಿಲ್‌ಬೈಡೆನ್‌ದಂಪತಿ ಮೋದಿ ಅವರಿಗಾಗಿ ಆತ್ಮೀಯ ಔತಣಕೂಟವೊಂದನ್ನು ಏರ್ಪಡಿಸಿದ್ದಾರೆ. ತನ್ಮೂಲಕ ಮೋದಿ ಅವರಿಗೆ ವಿಶೇಷ ಗೌರವ ನೀಡಲು ಮುಂದಾಗಿದ್ದಾರೆ.