ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್‌ಹಾರಾಟ ನಡೆಸಿದ್ದು, ಪ್ರಧಾನಿ ನಿವಾಸದ ಬಳಿ ನೋ ಫ್ಲೈಯಿಂಗ್‌ಝೋನ್ ಇದ್ದರೂ ಡ್ರೋನ್‌ಹಾರಾಡಿರೋದು ಆತಂಕ ಮೂಡಿಸಿದ್ದು ಈ ಹಿನ್ನೆಲೆ ಇದನ್ನು ಕಂಡ ಪ್ರಧಾನಿಗಳ ವಿಶೇಷ ಭದ್ರತಾ ಪಡೆಯಾದ ಎಸ್‌ಪಿಜಿ ಕೂಡಲೇ ಅಲರ್ಟ್‌ಆಗಿದೆ. ನೋ ಫ್ಲೈಯಿಂಗ್ ಝೋನ್‌ನಲ್ಲಿ ಬೆಳಗ್ಗೆ 5 – 5:30ರ ಸಮಯದಲ್ಲಿ ಡ್ರೋನ್ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿಗಳು “ಇದುವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ. ಶೋಧ ನಡೆಯುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.