ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಭಾರತವನ್ನು ಜಗತ್ತು ಅಪ್ಪಿಕೊಳ್ಳುತ್ತಿದೆ

ಭಾರತದ ಜನತೆ ಎಂದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಹಾಗೂ ಪಕ್ಷದ ಯುವರಾಜ ರಾಹುಲ್‌ಗಾಂಧಿಯನ್ನು ಒಳಗೊಂಡ ಕುಟುಂಬ ರಾಜಕೀಯವನ್ನು ತಿರಸ್ಕರಿಸಿದರೋ ಆ ದಿನದಿoದಲೂ, ಭಾರತದ ಪ್ರಜಾಪ್ರಭುತ್ವವನ್ನು ದೂಷಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುವ ರಾಜಕೀಯ ಗುಂಪು ಹುಟ್ಟಿಕೊಂಡಿದೆ. ಅದೂ ಮಾತ್ರವಲ್ಲದೆ ಸಿಕ್ಕ ಸಣ್ಣ ಅವಕಾಶದಲ್ಲೂ ದೇಶದ ಹೆಸರನ್ನು ಹಾಳು ಮಾಡುವುದರಲ್ಲಿಯೇ ಅವರು ನಿರತರಾಗಿದ್ದಾರೆ. ಕೆಲವು ದಿನಗಳ ಹಿಂದೆ ರಾಹುಲ್‌ಗಾಂಧಿ ಬ್ರಿಟನ್‌ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಬ್ರಿಟನ್‌ಹಾಗೂ ಅಮೆರಿಕ ದೇಶಗಳು ಪ್ರಜಾಪ್ರಭುತ್ವದ ರಕ್ಷಕರು ಎನ್ನುವ ಅರ್ಥದಲ್ಲಿ ಮಾತನಾಡಿದ್ದು ಮಾತ್ರವಲ್ಲದೆ, ಭಾರತದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಈ ದೇಶಗಳು ಮಧ್ಯಪ್ರವೇಶಿಬೇಕು ಎನ್ನುವ ಅರ್ಥದಲ್ಲಿ ಮನವಿ ಮಾಡಿದ್ದರು. ಪ್ರತಿ ಬಾರಿ ರಾಹುಲ್‌ಗಾಂಧಿ ಮಾತನಾಡುವಾಗಲೂ ಭಾರತ ವಿರೋಧಿ ಅಂಶಗಳು ಪ್ರಕಟವಾಗುತ್ತಿದೆ. ಆದರೆ, ಜಗತ್ತಿನ ಕ್ರಮಗಳು ಬದಲಾಗುತ್ತಿವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಹೊಸ ಭಾರತವನ್ನು ಜಗತ್ತು ಅಪ್ಪಿಕೊಳ್ಳುತ್ತಿದೆ ಎಂದು ಬರೆದಿದ್ದಾರೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರೇಮ್‌ಶುಕ್ಲಾ.

Leave a Reply

Your email address will not be published. Required fields are marked *