ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ ನಮ್ಮ ರಾಜ್ಯಕ್ಕೆ ನಾವು ಬಾಧ್ಯತೆಯನ್ನು ಹೊಂದಿದ್ದೇವೆ: ಮಾಲ್ಡೀವ್ಸ್‌ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಯ ಕ್ಷಮೆಯಾಚಿಸಿ ಎಂದು ಮಾಲ್ಡೀವ್ಸ್‌ಅಧ್ಯಕ್ಷ ಮೊಹಮ್ಮದ್‌ಮುಯಿಜ್ಜು ಅವರಿಗೆ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ ನಾಯಕ ಖಾಸಿಮ್ ಇಬ್ರಾಹಿಂ ಒತ್ತಾಯಿಸಿದ್ದಾರೆ. ಮಾಲ್ಡೀವಿಯನ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ದೇಶದ ಪ್ರಮುಖ ಪ್ರತಿಪಕ್ಷ MDP. ಈ ಪಕ್ಷ ದೇಶದ ಅಧ್ಯಕ್ಷರ ವಿರುದ್ಧ ದೋಷಾರೋಪಣೆಯ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇದು ಸರ್ಕಾರದ ಪರ ಸಂಸದರು ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಸದನದಲ್ಲಿ ಘರ್ಷಣೆ ಉಂಟುಮಾಡಿದ ನಂತರದ ಬೆಳವಣಿಗೆಯಾಗಿದೆ.ಯಾವುದೇ ದೇಶವಾಗಲಿ ಅಥವಾ ನಮ್ಮ ನೆರೆಹೊರೆಯ ದೇಶದ ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಾತನಾಡಬಾರದು. ನಮ್ಮ ರಾಜ್ಯಕ್ಕೆ ನಾವು ಬಾಧ್ಯತೆಯನ್ನು ಹೊಂದಿದ್ದೇವೆ. ಅದನ್ನು ಪರಿಗಣಿಸಬೇಕು ಎಂದು ಖಾಸಿಮ್‌ತಿಳಿಸಿದ್ದಾರೆ.

Leave a Reply

Your email address will not be published. Required fields are marked *