ಪ್ರಮುಖ 5 ಖಾತೆಗಳು ನನಗೆ ಬೇಕೇ ಬೇಕು ಡಿಕೆ ಶಿವಕುಮಾರ್‌ಪಟ್ಟು

ದೆಹಲಿಯಲ್ಲಿ ಸಂಪುಟ ಕಸರತ್ತು ನಡೆಯುತ್ತಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ಜೊತೆ ನಡೆದ ಸಭೆಯಲ್ಲಿ ಪ್ರಮುಖ 5 ಖಾತೆಗಳು ನನಗೆ ಬೇಕೇ ಬೇಕು ಎಂದು ಡಿಕೆಶಿ ಹಠ ಹಿಡಿದಿದ್ದಾರೆ. ಬೆಂಗಳೂರು ಅಭಿವೃದ್ಧಿ, ಜಲಸಂಪನ್ಮೂಲ, ಇಂಧನ, ಗೃಹ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಖಾತೆ ನೀಡುವಂತೆ ಡಿಕೆಶಿ ಬೇಡಿಕೆ ಇಟ್ಟಿದ್ದಾರೆ. ಡಿಕೆ ಶಿವಕುಮಾರ್‌ಸಿಎಂ ಪಟ್ಟ ಕೇಳಿದಾಗ ಹೈಕಮಾಂಡ್‌ನಿರಾಕರಿಸಿ ಡಿಸಿಎಂ ಪಟ್ಟ ನೀಡಿತ್ತು. ಒಂದೇ ಡಿಸಿಎಂ ಇರಬೇಕು, ಬೇರೆ ಯಾರಿಗೆ ಡಿಸಿಎಂ ಕೊಡಬಾರದು ಎಂದು ಶಿವಕುಮಾರ್‌ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯಂತೆ ಸಿದ್ದರಾಮಯ್ಯ ಸಂಪುಟದಲ್ಲಿ ಒಂದೇ ಡಿಸಿಎಂ ನೀಡಲಾಗಿದೆ. ಈಗ ಡಿಕೆ ಶಿವಕುಮಾರ್‌ಹೊಸ ಬೇಡಿಕೆಯನ್ನು ಇರಿಸಿದ ಹಿನ್ನೆಲೆಯಲ್ಲಿ ಯಾರಿಗೆ ಈ ಖಾತೆಗಳನ್ನು ಹಂಚಿಕೆ ಮಾಡಬಹುದು ಎಂಬ ಕುತೂಹಲ ಹೆಚ್ಚಾಗಿದೆ.

Leave a Reply

Your email address will not be published. Required fields are marked *