ಬುಧವಾರ ಸಂಸತ್ತಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಬಹಳ ವಿಶೇಷವಾಗಿ ಕಂಡರು. ರಾಜ್ಯಸಭೆಯಲ್ಲಿ ಬಜೆಟ್‌ಕುರಿತಾದ ಚರ್ಚೆಯ ವೇಳೆ ಸದನದಲ್ಲಿ ಹಾಜರಿದ್ದ ಪ್ರಧಾನಿ ಮೋದಿ, ಪ್ಲಾಸ್ಟಿಕ್‌ಬಾಟಲಿಯ ತ್ಯಾಜ್ಯದಿಂದ ತಯಾರಿಸಲಾದ ಜಾಕೆಟ್‌ಅನ್ನು ಧರಿಸಿ ಬಂದಿದ್ದರು. ಸೋಮವಾರ ಕರ್ನಾಟಕಕ್ಕೆ ಇಂಡಿಯಾ ಎನರ್ಜಿ ವೀಕ್‌ಉದ್ಘಾಟನೆಗಾಗಿ ಬಂದಿದ್ದ ಪ್ರಧಾನಿ ಮೋದಿಗೆ ದೇಶದ ಅತೀದೊಡ್ಡ ತೈಲ ಕಂಪನಿ ಇಂಡಿಯನ್‌ಆಯಿಲ್‌ಕಾರ್ಪೋರೇಷನ್, ಇದನ್ನು ಉಡುಗೊರೆಯಾಗಿ ನೀಡಿತ್ತು. ಇದೇ ಜಾಕೆಟ್‌ಅನ್ನು ಧರಿಸಿ ಮೋದಿ ಸಂಸತ್ತಿನಲ್ಲಿ ಕುಳಿತುಕೊಂಡಿದ್ದರು.