ಫೆಬ್ರವರಿ ಮೂರನೇ ವಾರದಲ್ಲಿ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ. ಚುನಾವಣೆ ಹತ್ತಿರದ ಬಜೆಟ್ ಆಗಿರುವ ಕಾರಣ ಬಂಪರ್ ಗಿಫ್ಟ್‌ಗಳ ಸುರಿಮಳೆ ಸಾಧ್ಯತೆ ಇದೆ. ಬಜೆಟ್ ಮಂಡಿಸಲು ಈಗಾಗಲೇ ಬ್ಲೂಪ್ರಿಂಟ್ ರೆಡಿ ಮಾಡುವಂತೆ ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ. ಜನಪ್ರಿಯ ಯೋಜನೆಗಳ ಬಗ್ಗೆ ಪ್ಲ್ಯಾನ್ ಮಾಡಿ, ಬ್ಲೂಪ್ರಿಂಟ್ ಕೊಡಿ. ಮಹಿಳೆಯರು, ರೈತರು, ಶ್ರಮಿಕ ವರ್ಗ ಗಮನದಲ್ಲಿಟ್ಟುಕೊಂಡುಜನಪ್ರಿಯ ಯೋಜನೆಗಳು ಇರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ಸರಿಯಾಗಿ ನಿಲ್ಲುವಂತಹ ಪ್ಲ್ಯಾನ್ ಮಾಡಿ ಎಂದಿದ್ದಾರೆ.ಕಾಂಗ್ರೆಸ್ ಪ್ರಣಾಳಿಕೆಯ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ತಂತ್ರ ನಡೆಸಿದ್ದು, ಕಾಂಗ್ರೆಸ್ ಭರವಸೆಗಳ ಸುರಿಮಳೆಗೆ ತಡೆ ಹಾಕಲು ಬಜೆಟ್ ಘೋಷಣೆ ಅಸ್ತ್ರ ಪುಕ್ಕಟೆ ಜಾಗಟೆ ಶಬ್ದ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಸಲಿ ಕಾರ್ಯತಂತ್ರ ಜಾರಿ ಎಷ್ಟು ಎಂಬುದರ ಮೇಲೆ ಎಲ್ಲರ ಬಣ ಬಯಲಾಗುವುದಂತೂ ಸ್ಪಷ್ಟ