ಕಾಂಗ್ರೆಸ್‌ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಭರವಸೆ ಸಾಕಷ್ಟು ಸದ್ದು ಮಾಡುತ್ತಿದ್ದು, ಕೈ ಭರವಸೆ ವಿರುದ್ದ ಯಡಿಯೂರಪ್ಪ ಗರಂ ಆಗಿದ್ದಾರೆ.ಈ ಕುರಿತು ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಜರಂಗ ದಳ ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ ಹೇಳಿದೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಜರಂಗ ದಳವನ್ನು ಯಾವನಿಂದಲೂ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ, ಹುಚ್ಚುಚ್ಚುರು ತರ ಆಡ್ತಿರೋ ಕಾಂಗ್ರೆಸ್ ನಾಯಕರಿಗೆ ಜನರು ಚುನಾವಣೆಯಯಲ್ಲಿ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ಯಡಿಯೂರಪ್ಪ ಕಾಂಗ್ರೆಸ್‌ನಾಯಕರ ವಿರುದ್ದ ಹರಿಹಾಯ್ದಿದ್ದಾರೆ.
ನರೇಂದ್ರ ಮೋದಿಯ ಬೆಂಗಳೂರು ರೋಡ್ ಶೋ ಬದಲಾವಣೆ ಆಗಿದೆ. ಶನಿವಾರ ಸಂಜೆ ಇದ್ದ ರೋಡ್ ಶೋ ಭಾನುವಾರ ಬೆಳಿಗ್ಗೆಗೆ ನಡೆಯಲಿದೆ ಎಂದು ಹೇಳಿದರು.