ಪರಿಷತ್ತಿನ ನೂತನ ಸಭಾಪತಿಗಳಾಗಿ ಇಂದು ಹೊರಟ್ಟಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಸದನದಲ್ಲಿ ಮಾತನಾಡಿದ ಸವದಿ, ಬಸವರಾಜ ಹೊರಟ್ಟಿ ಮೇಲೆ ಹೊಟ್ಟೆ ಕಿಚ್ಚು ಇದೆ. ನಿಮ್ಮ ಆರೋಗ್ಯದ ಗುಟ್ಟೇನು? ಹೇಗೆ 8 ಬಾರಿ ಗೆದ್ದಿದ್ದೀರಿ. ಬಳಿಕ ಮುಂದುವರಿಸಿ ಹೊರಟ್ಟಿ ಕಬಡ್ಡಿ ಪ್ಲೇಯರ್. ಈಗಲೂ ಹೊರಟ್ಟಿ ಬಿಟ್ಟರೆ ಚೆನ್ನಾಗಿ ಕಬಡ್ಡಿ ಆಡ್ತಾರೆ. ಸೈಕಲ್ ಕೂಡಾ ಹೊಡೆಯುತ್ತಾರಂತೆ ಆದರೆ ಅದರ ಗುಟ್ಟು ಮಾತ್ರ ಹೇಳಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ಬಳಿಕ ಪ್ರಕಾಶ್ ರಾಥೋಡ್ ಮಾತನಾಡಿ, ಈ ಸ್ಥಾನ ನಿಮಗೆ ಶೋಭೆ ತರುವಂತಹದ್ದು. ನೀವು ಬಿಜೆಪಿ ಸೇರುವಾಗ ಸ್ವಲ್ಪ ನೋವು ಅನುಭವಿಸಿದ್ದೀರಾ. ಈ ಸ್ಥಾನಕ್ಕೆ ನೀವು ನ್ಯಾಯ ಕೊಡ್ತೀರಾ ಅನ್ನೋ ವಿಶ್ವಾಸ ಇದೆ. ಶಾಸಕರ ಪ್ರವಾಸ ವ್ಯವಸ್ಥೆ ಮತ್ತೆ ಪ್ರಾರಂಭ ಮಾಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.