ರಾಯಚೂರು ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು, ಬಚ್ಚಾ ರಾಹುಲ್ ಗಾಂಧಿ ಮೋದಿ ಬಗ್ಗೆ ಮಾತನಾಡುತ್ತಾನೆ. ಮುಂಬರುವ ವಿಧಾನ ಮಂಡಲದಲ್ಲಿ ನಿಮ್ಮ ಹಗರಣಗಳನ್ನ ಬಯಲಿಗೆಳೆಯುತ್ತೇವೆ. ನಿಮ್ಮ ಹಗರಣಗಳನ್ನ ತನಿಖೆ ಮಾಡಿಸಿ, ನಿಮ್ಮನ್ನ ಎಲ್ಲಿ ನಿಲ್ಲಿಸಬೇಕು ಅಲ್ಲಿ ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಬಿಎಸ್‍ವೈ ಎಚ್ಚರಿಕೆ ನೀಡಿದರು. ರಾಬರ್ಟ್ ವಾದ್ರಾ ಮಾಡಿದ್ದ ಹಗರಣದ ಪಟ್ಟಿ ಇದೆಯಾ..?, ನ್ಯಾಷನಲ್ ಹೆರಾಲ್ಡ್ ಹಗರಣ ಗೊತ್ತಿಲ್ವೇ..?, ಈವರೆಗೆ ಹಗರಣ ಮಾಡದ ಮೋದಿ ಬಗ್ಗೆ ಮಾತನಾಡ್ತೀರಾ..?, 25 ಲಕ್ಷ ಹುಬ್ಲೋಟ್ ವಾಚ್ ಯಾರೂ ಕೊಟ್ಟಿದ್ರು..? ಕೋಟ್ಯಂತರ ರೂ.ಬೆಲೆಬಾಳುವ ಜಮೀನನ್ನ ರಿಯಲ್ ಎಸ್ಟೇಟ್ ಅವರಿಗೆ ಮಾರಾಟ ಮಾಡಿದ್ದೀರಿ ಸಿದ್ದರಾಮಯ್ಯನವರೇ ನೀವು ಬಾಯಿ ಮುಚ್ಚಿಕೊಂಡು ಸ್ವಲ್ಪ ಸುಮ್ಮನಿರಿ. ಮೋದಿ ಬಗ್ಗೆ ಮಾತನಾಡುವ ಯೋಗ್ಯತೆಯಿದೆಯಾ ನಿಮಗೆ. ಪ್ರಧಾನಿ ಕಾಲಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ಮಾಜಿ ಸಿಎಂ ವಿರುದ್ಧ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದರು.