ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್‌ಅವರು, ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ಹಾಗೂ ಶ್ರೀನಿವಾಸ್‌ಪ್ರಸಾದ್‌ನನಗೆ ಹಣ ಕೊಡಲು ಬಂದಿದ್ದರು ಜೆಡಿಎಸ್‌ತೊರೆದು ಬಿಜೆಪಿ ಸೇರಲು ನನಗೆ ಹಣದ ಆಮಿಷ ಒಡ್ಡಿದ್ದರು. ಇದರ ಬಗ್ಗೆ ತಿಳಿಯಲು ಬಾಂಬೆ ಡೈರೀಸ್ ಓದಿ. ಬಾಂಬೆ ಡೈರೀಸ್‌ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎಂದು ವಿಶ್ವನಾಥ್‌ತಿಳಿಸಿದ್ದಾರೆ. ಆದರೆ ಎಷ್ಟು ಹಣ ಕೊಡಲು ಬಂದಿದ್ದರು? ನೀವು ಹಣ ಪಡೆದುಕೊಂಡಿರಾ ಎಂಬ ಪ್ರಶ್ನೆಗೆ ಉತ್ತರ ನೀಡಲಿಲ್ಲ.ಸಂಸದ ವಿ.ಶ್ರೀನಿವಾಸ್‌ಪ್ರಸಾದ್‌ವಿರುದ್ಧ ಕಿಡಿಕಾರಿದ ವಿಶ್ವನಾಥ್, ನಾನು ಅಲೆಮಾರಿ, ನೀವೂ ಅಲೆಮಾರಿಗಳ ರಾಜ. 40 ವರ್ಷಗಳಲ್ಲಿ ಒಂದೊಂದು ಪಕ್ಷಕ್ಕೆ ಎರಡೆರಡು ಬಾರಿ ಹೋಗಿ ಬಂದಿದ್ದೀರಿ. ಯಾರ ಪರವೂ ಧ್ವನಿ ಎತ್ತದ ನೀವೂ ಏಕಾಏಕಿ ನನ್ನ ಮೇಲೆ ಸೊಲ್ಲೆತ್ತಲು ಕಾರಣ ಏನು? ಯಾರನ್ನ ಮೆಚ್ಚಿಸಲು ಹೋಗುತ್ತಿದ್ದೀರಾ? ಈಗ ಬಿಜೆಪಿ ಸರ್ಕಾರ ವಿಸ್ತರಣೆ ಆಗತ್ತಿದೆ. ಇಲ್ಲಿ ಏನಾದರು ಪಡೆಯಲು ಈ ರೀತಿ ಮಾಡುತ್ತಿದ್ದೀರಾ? ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲ ಮಾತಾಡಬಾರದು. ನಾನು, ನೀವೂ ಹಳೆಯ ಸ್ನೇಹಿತರು. ನಿಮ್ಮ ಮಾತನ್ನು ಎಂದೂ ನಾನು ಹಿಂತೆಗೆದಿಲ್ಲ. ಅಳಿಯನಿಗೆ ನಂಜನಗೂಡು, ನರಸೀಪುರ ಮಗಳಿಗೆ ಕೊಡಿಸ್ಬೇಕು ಅಂತನಾ ಎಂದು ತರಾಟೆಗೆ ತೆಗೆದುಕೊಂಡರು.