ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ‘ದಹಿ’ ಎಂದು ಮುದ್ರಿಸಲು ಕೆಎಂಎಫ್‌ಗೆ ಎಫ್‌ಎಸ್‌ಎಸ್‌ಎಐ ಆದೇಶ ನೀಡಿರುವುದು ತಪ್ಪು. ‘ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಜೀವನಾಡಿ ಈ ಮೂಲಕ ಕೇಂದ್ರ ಸರ್ಕಾರ ನೇರವಾಗಿಯೇ ಹಿಂದಿ ಹೇರಿಕೆ ಮಾಡುತ್ತಿದೆ.ಅಲ್ಲದೆ, ಯಶವಂತಪುರ ಪಂಚರತ್ನ ಯಾತ್ರೆ ವೇಳೆ ‘ನಂದಿನಿ ಉಳಿಸಿ’ ಎಂದು ಮೊಸರು, ಹಾಲಿನ ಹಾರ ಹಾಕಿ ಜೆಡಿಎಸ್‌ಕಾರ್ಯಕರ್ತರು ಎಚ್ಚರಿಸಿದ್ದರು. ಹಿಂದಿ ಹೇರಿಕೆ ಮೂಲಕ ನಂದಿನಿಯನ್ನು ಅಮುಲ್‌ಮೂಲಕ ವಿಲೀನ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಆರೋಪ ಮಾಡಿದ್ದಾರೆ.