ಇಂದು ಮಹಾದೇವಪುರ, ಕೆ.ಆರ್ ಪುರಂನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಮಹಾದೇವಪುರ ವಲಯದ ಮೊನೆನುಕೊಳಲು ಬಳಿಯ ಸ್ಪೈಸ್ ಗಾರ್ಡನ್‌ನಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. 22 ಬಿಲ್ಡಿಂಗ್‌ಗಳನ್ನ ಮಾರ್ಕ್ ಮಾಡಿದ್ದು, ಇದರಲ್ಲಿ ನಿರ್ಮಾಣ ಹಂತದ ಕಟ್ಟಡಗಳು, ಗೋಡೆಗಳು ಮತ್ತು ಖಾಲಿ ಸೈಟ್‌ಗಳು ಕೂಡ ಇವೆ. 21 ಬಿಲ್ಡಿಂಗ್‌ಗಳನ್ನ ಹಂತಹಂತವಾಗಿ ತೆರವು ಕಾರ್ಯಾಚರಣೆ ಮಾಡಲಿದ್ದಾರೆ.15 ದಿನದಲ್ಲಿ 100 ತೆರವು ಕಾರ್ಯಾಚರಣೆ ಮಾಡೋ ಗುರಿ ಹೊಂದಲಾಗಿದೆ. 571 ಕಡೆ ತೆರವು ಮಾಡಬೇಕಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.ಕೋರ್ಟ್‌ನಿಂದ ತಡೆ ತಂದವರ ವಿರುದ್ಧ ಕಾನೂನು ಸಮರಕ್ಕೆ ಕೂಡ ಬಿಬಿಎಂಪಿ ಮುಂದಾಗಿದೆ.