ಬೆಂಗಳೂರಿನ ರಸ್ತೆಗಳ ತುಂಬಾ ಗುಂಡಿಗಳು ಬಿದ್ದಿವೆ ದಿನ ನಿತ್ಯ ಪ್ರಯಾಣಿಕರು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆರಳಲು ಹರಸಾಹಸ ಪಡುವಂತಾಗಿದೆ. ಯಾವ ರಸ್ತೆಯಲ್ಲಿ ಗುಂಡಿ ಇದೆ, ಎಷ್ಟು ಗುಂಡಿಗಳಿವೆ ಅಂತ ಫೋಟೊ ಸಮೇತ ಪೊಲೀಸರು ಬಿಬಿಎಂಪಿಗೆ ಮಾಹಿತಿ ನೀಡುತ್ತಿದ್ದರೂ ಅದನ್ನು ರಿಪೇರಿ ಮಾಡುವ ಕೆಲಸಕ್ಕೆ ಬಿಬಿಎಂಪಿ ಮುಂದಾಗುತ್ತಿಲ್ಲ. ಇದೇ ಕಾರಣಕ್ಕೆ ಬೇಸತ್ತ ಟ್ರಾಫಿಕ್‌ಪೊಲೀಸರು ಬಿಬಿಎಂಪಿ ಕೆಲಸವನ್ನು ತಮ್ಮ ಹೆಗಲಿಗೆ ಹೊತ್ತುಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿದ್ದಾರೆ. ನಗರದ ವಿವಿದೆಡೆ ರಸ್ತೆಗುಂಡಿಗಳ ಕಾರಣದಿಂದ ದಿನಕ್ಕೆ ಹತ್ತಾರು ಅಪಘಾತಗಳು ಆಗುತ್ತಿವೆ. ಇದೇ ಕಾರಣಕ್ಕೆ ಬಿಬಿಎಂಪಿ ಏನೂ ಮಾಡುವುದಿಲ್ಲ ಎಂದು ಬೇಸತ್ತು ಟ್ರಾಫಿಕ್‌ಪೊಲೀಸರೇ ಮಾನವೀಯತೆ ಮೆರೆಯುತ್ತಿದ್ದಾರೆ