ಬಿಬಿಎಂಪಿ ವ್ಯಾಪ್ತಿಯ ರಾಜಾಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿಯಲ್ಲಿರುವ ಅಂಶವನ್ನು ಸೋಮವಾರದ ಒಳಗೆ ಬಹಿರಂಗ ಪಡಿಸುವಂತೆ ರಾಜ್ಯ ಹೈಕೋರ್ಟ್ ಸೂಚಿಸಿದೆ. ಒತ್ತುವರಿ ವಿಚಾರದಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಮಾತ್ರ ಸರಕಾರದ ಶೂರತ್ವ, ಪ್ರಭಾವಿಗಳ ಮುಂದೆ ಅಲ್ಲ ಎನ್ನುವ ಆರೋಪ ಎದುರಾಗಿದೆ. ಒಟ್ಟಿನಲ್ಲಿ, ಒತ್ತುವರಿ ವಿಚಾರದಲ್ಲಿ ಎಲ್ಲಾ ಸರಕಾರವೂ ಒಂದೇ ಎನ್ನುವುದು ಮತ್ತೆಮತ್ತೆ ಸಾಬೀತಾಗಿದೆ.