ತೀವ್ರ ಕುತೂಹಲ ಕೆರಳಿಸಿರುವ ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್‌ಅಂತಿಮ ಆದೇಶ ನೀಡುತ್ತದೆಂದು ಭಾವಿಸಲಾಗಿತ್ತು ಪ್ರಕರಣ ಮತ್ತೆ ಸುಪ್ರೀಂಕೋರ್ಟ್‌ನಿಂದ ಹೈಕೋರ್ಟ್‌ಗೆ ಬಂದಿದೆ. ಅದರೆ ಸುಪ್ರೀಂಕೋರ್ಟ್, ಚುನಾವಣೆಯ ಕುರಿತು ನಿರ್ಧರಿಸುವ ಜವಾಬ್ದಾರಿ ಹೈಕೋರ್ಟ್‌ಗೆ ನೀಡಿದೆ ”ಕಾನೂನು ಪ್ರಕಾರ ಹೈಕೋರ್ಟ್‌ತನ್ನ ಮುಂದಿರುವ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿ ಜೇಷ್ಠತೆ ಆಧರಿಸಿ ತೀರ್ಪು ನೀಡಬಹುದು” ಎಂದು ಹೇಳಿತು. ಹಾಗಾಗಿ ಹೈಕೋರ್ಟ್‌ನಲ್ಲಿ ಆ.29ರಂದು ವಾರ್ಡ್‌ಪುನರ್‌ವಿಂಗಡಣೆ ಪ್ರಶ್ನಿಸಿರುವ ಅರ್ಜಿಗಳು ಮತ್ತು ಸೆ.1ರಂದು ವಾರ್ಡ್‌ವಾರು ಮೀಸಲು ಪ್ರಶ್ನಿಸಿರುವ ಅರ್ಜಿಗಳು ವಿಚಾರಣೆಗೆ ಬರಲಿದ್ದು, ಅದು ಅರ್ಜಿದಾರರ, ಸರಕಾರ ಮತ್ತು ಚುನಾವಣಾ ಆಯೋಗ- ಮೂವರ ವಾದ-ಪ್ರತಿವಾದ ಆಲಿಸಿ ಜೇಷ್ಠತೆಯ ಮೇಲೆ ತೀರ್ಪು ನೀಡಬೇಕಿದೆ.