ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 19-09-2022 ರನ್ನು ಕೊನೆ ದಿನಾಂಕವಾಗಿ ನಿಗದಿಪಡಿಸಿರುವುದನ್ನು ಮಾಡಲಾಗಿತ್ತು. ಇದೀಗ ಈ ಅವಧಿಯನ್ನು ದಿನಾಂಕ: 19-10-2022ರವರೆಗೆ ಬಿಬಿಎಂಪಿ ವಿಸ್ತರಿಸಿದೆ. ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಸ್ವಂತ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು 5.00 ಲಕ್ಷ ರೂ ಗಳ ಸಹಾಯಧನ. ಪದವಿ ಹಾಗೂ ಸ್ನಾತಕೊತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲವಾಗಲು ಉಚಿತ ಲ್ಯಾಪ್‌ಟಾಪ್. ಅಂಧರಿಗೆ ಸ್ಮಾರ್ಟ್ ಸ್ಟಿಕ್. ಅಂಧ ವಿದ್ಯಾರ್ಥಿಗಳಿಗೆ ಎಜುಕೇಷನಲ್ ಲ್ಯಾಪ್‌ಟಾಪ್. ಹಿರಿಯ ನಾಗರಿಕರಿಗೆ ಮಡಚಬಹುದಾದ ವೀಲ್ ಚೇರ್. ಪಾಲಿಕೆಯ ವೆಬ್ ಜಾಲತಾಣವಾದ https://welfare.bbmpgov.in/ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ರೂ. 30/- ಶುಲ್ಕವನ್ನು ಪಾವತಿಸಿ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.