ಬಿಬಿಎಂಪಿ ವಿಂಗಡಿಸಿ 5 ಪ್ರತ್ಯೇಕ ಮಹಾನಗರ ಪಾಲಿಕೆಗಳನ್ನು ರಚಿಸಬೇಕು ಜನರಿಂದಲೇ ಮೇಯರ್‌ಆಯ್ಕೆ ಪ್ರಕ್ರಿಯೆ ನಡೆಸಬೇಕು: ಪಾಲಿಕೆ ಚುನಾವಣೆ ಮುಂದೂಡಿಕೆ?

ಬಿಬಿಎಂಪಿ ಪುನಾರಚನೆಗೆ ಸಂಬಂಧಿಸಿದಂತೆ 2016-17ರಲ್ಲಿ ಅಂದೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಿವೃತ್ತ ಐಎಎಸ್‌ಅಧಿಕಾರಿ ಬಿ.ಎಸ್‌. ಪಾಟೀಲ್‌ ನೇತೃತ್ವದ ಸಮಿತಿ ರಚಿಸಿದ್ದರು. ಸಮಿತಿಯು ಹಲವು ಅಧ್ಯಯನ, ಸಭೆಗಳ ನಂತರ 2018ರಲ್ಲಿ ಬಿಬಿಎಂಪಿ ಪುನಾರಚನೆಗೆ ಸಂಬಂಧಿಸಿದಂತೆ ವರದಿ ನೀಡಲಾಗಿತ್ತು. ಆ ವರದಿ ಪ್ರಕಾರ ಬೆಂಗಳೂರಿನ ವಿಸ್ತೀರ್ಣ ಹೆಚ್ಚಿಸಿ ಗ್ರೇಟರ್‌ಬೆಂಗಳೂರು ರಚಿಸಬೇಕು, ಬಿಬಿಎಂಪಿ ವಿಂಗಡಿಸಿ 5 ಪ್ರತ್ಯೇಕ ಮಹಾನಗರ ಪಾಲಿಕೆಗಳನ್ನು ರಚಿಸಬೇಕು ಹಾಗೂ ಜನರಿಂದಲೇ ಮೇಯರ್‌ಆಯ್ಕೆ ಪ್ರಕ್ರಿಯೆ ನಡೆಸಬೇಕು. ಜತೆಗೆ 5 ಮಹಾನಗರ ಪಾಲಿಕೆಯು ಆ ಮೇಯರ್‌ಅಡಿಯಲ್ಲಿ ಬರಬೇಕು ಹಾಗೂ ಮೇಯರ್‌ಅಧಿಕಾರಾವಧಿ ಒಂದು ವರ್ಷದ ಬದಲು 5 ವರ್ಷಕ್ಕೆ ಹೆಚ್ಚಿಸಬೇಕು ಎಂದು ತಿಳಿಸಲಾಗಿತ್ತು.. ಇದೀಗ ಬಿ.ಎಸ್‌.ಪಾಟೀಲ್‌ಸಮಿತಿಯನ್ನು ಮರು ಸ್ಥಾಪಿಸಲಾಗಿದ್ದು, ಬಿಬಿಎಂಪಿ ಪುನಾರಚನೆಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಇದು ಈಗ ಬಿಬಿಎಂಪಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *