ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ಮಾತ್ರವಲ್ಲ, ಇನ್ನುಮುಂದೆ ಯಡಿಯೂರಪ್ಪ, ಡಾಕ್ಟರ್ ಯಡಿಯೂರಪ್ಪ ಆಗಲಿದ್ದಾರೆ

ರಾಜ್ಯದಲ್ಲಿ ರೈತರ ಪರವಾಗಿ ಹೋರಾಟ ಮಾಡಿದ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇನ್ನುಮುಂದೆ ನಾವೆಲ್ಲರೂ ಡಾಕ್ಟರ್ಯಡಿಯೂರಪ್ಪ ಅಂತ ಕರಿಬೇಕು. ಇದಕ್ಕೆ ಕಾರಣ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ಪದವಿ ಪ್ರಮಾಣ ಮಾಡುತ್ತಿದೆ. ಹೌದು, ಜು.21ರಂದು ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿಮತ್ತು ತೋಟಗಾರಿಕೆ ವಿವಿ 8 ನೇ ಘಟಿಕೋತ್ಸವದಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.ಇವರು ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಕೃಷಿ ಆಯವ್ಯಯ ಮಂಡಿಸಿ ದೇಶಕ್ಕೆ ಮಾದರಿಯಾಗಿದ್ದಾರೆ. ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ವಿನೂತನ ಯೋಜನೆಗಳನ್ನು ಸಾಕಾರಗೊಳಿಸಿದ ಸಮಾಜಮುಖಿಚಿಂತಕರಾಗಿದ್ದಾರೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ಪ್ರಶಸ್ತಿ ಪ್ರದಾನ ಮಾಡಿ ಅವರನ್ನು ಗೌರವಿಸಲಿದೆ ಎಂದು ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ ತಿಳಿಸಿದರು.

Leave a Reply

Your email address will not be published. Required fields are marked *