ಬೀದಿ ಬೀದಿಗಳಲ್ಲಿ ಹೆಣ ಬಿದ್ದರೂ ಯುದ್ಧ ಶಾಂತವಾಗಿಲ್ಲ, ರಕ್ತದಾಹ ಇನ್ನೂ ಕಡಿಮೆ ಆಗಿಲ್ಲ!

ಬೀದಿ ಬೀದಿಗಳಲ್ಲಿ ಹೆಣ ಬಿದ್ದರೂ ಯುದ್ಧವು ಶಾಂತವಾಗಿಲ್ಲ. ರಕ್ತದಾಹ ಇನ್ನೂ ಕಡಿಮೆ ಆಗಿಲ್ಲ, ಅಂದಹಾಗೆ ಇದು ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಕಾಳಗದ ಭಯಾನಕ ಮುಖ. ಉಕ್ರೇನ್‌ನ ಕ್ರಿವಿ ರಿಹ್ ಸಿಟಿ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಭೀಕರ ದಾಳಿ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಕಟ್ಟಡ ಅವಶೇಷದಡಿ ಕನಿಷ್ಠ 53 ಜನ ಸಿಲುಕಿದ್ದಾರೆ ಎನ್ನಲಾಗಿದೆ. ಒಟ್ಟು 2 ಅಪಾರ್ಟ್‌ಮೆಂಟ್‌ಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಅಪಾರ್ಟ್‌ಮೆಂಟ್‌ನ 4 ಮತ್ತು 9ನೇ ಮಹಡಿ ಸಂಪೂರ್ಣ ಛಿದ್ರವಾಗಿದ್ದು, ಇದೇ ಸಂದರ್ಭದಲ್ಲಿ ಯೂನಿವರ್ಸಿಟಿ ಕಟ್ಟಡ ಭಾಗಶಃ ಹಾನಿಯಾಗಿದೆ ಎಂದು ಉಕ್ರೇನ್‌ನ ಪಡೆಗಳು ಮಾಹಿತಿ ನೀಡಿವೆ.

Leave a Reply

Your email address will not be published. Required fields are marked *