ಬುರ್ಖಾ ಧರಿಸದ ವಿದ್ಯಾರ್ಥಿನಿಯರನ್ನು ಅಫ್ಘಾನ್ ವಿವಿಯಿಂದ ಹೊರಗಿಟ್ಟ ತಾಲಿಬಾನಿಗಳು ವಿದ್ಯಾರ್ಥಿನಿಯರ ಮೇಲೆ ಚಾಟಿ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಹಿಳೆಯರ ಶಿಕ್ಷಣ ವ್ಯವಸ್ಥೆ ಕುಗ್ಗಿ ಹೋಗಿದೆ. ಹೆಣ್ಣು ಮಕ್ಕಳ ಶಿಕ್ಷಣ ಆರನೇ ತರಗತಿಯಿಂದ ಹುಡುಗಿಯರು ಶಾಲೆಗೆ ಹೋಗುವ ಹಕ್ಕನ್ನು ಕಸಿದುಕೊಂಡಿರುವ ತಾಲಿಬಾನಿಗಳು ಯಾವ ಪ್ರತಿಭಟನೆಗಳಿಗೂ ಬಗ್ಗುತ್ತಿಲ್ಲ. ಇತ್ತೀಚೆಗೆ ಅಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಬುರ್ಖಾ ಧರಿಸದ ಕಾರಣ ವಿಶ್ವವಿದ್ಯಾಲಯಕ್ಕೆ ಪ್ರವೇಶ ನಿರಾಕರಿಸಿದ ತಾಲಿಬಾನ್ ಅಧಿಕಾರಿಯೊಬ್ಬ ತಮ್ಮ ಶಿಕ್ಷಣದ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರನ್ನು ಥಳಿಸುವ ಆಘಾತಕಾರಿ ದೃಶ್ಯಗಳು ಹೊರಬಂದಿವೆ. ವಿದ್ಯಾರ್ಥಿನಿಯರ ಮೇಲೆ ಚಾಟಿ ಬೀಸುತ್ತಿರುವ ಅಧಿಕಾರಿ ತಾಲಿಬಾನ್ ಸರ್ಕಾರದ ಉಪ ಸಚಿವಾಲಯಕ್ಕೆ ಸೇರಿದವರು ಎಂದು ಇಂಡಿಪೆಂಡೆಂಟ್ನಲ್ಲಿ ವರದಿಯಾಗಿದೆ.

Leave a Reply

Your email address will not be published. Required fields are marked *