ಬೆಂಗಳೂರನ್ನು ಸ್ಟಾರ್ಟ್ಅಪ್ ರಾಜಧಾನಿಯಾಗಿ ಪ್ರತಿನಿಧಿಸಲು ಯುನಿಕಾರ್ನ್ ತೋರಿಸುವ ಲೋಗೋಗೆ ಸೂಕ್ತ ಸ್ಥಳವನ್ನು ಹುಡುಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯೂನಿಕಾರ್ನ್ ಎಂಬುದು ಖಾಸಗಿ ಕಂಪನಿಗೆ 1 ಬಿಲಿಯನ್ ಡಾಲರ್‌ಮೌಲ್ಯವನ್ನು ಹೊಂದಿರುವ ಪದ. ಬೆಂಗಳೂರು ಸುಮಾರು 5,000 ಸ್ಟಾರ್ಟಪ್‌ಗಳಿಗೆ ನೆಲೆಯಾಗಿದೆ. ಬೆಂಗಳೂರು ಇಡೀ ದೇಶದಲ್ಲಿ ಅತಿ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು ಯುನಿಕಾರ್ನ್‌ಗಳನ್ನು ಹೊಂದಿರುವುದರಿಂದ, ಅದನ್ನು ಹೈಲೈಟ್ ಮಾಡಲು ಮತ್ತು ಪ್ರೋತ್ಸಾಹಿಸಲು ಯುನಿಕಾರ್ನ್ ಲೋಗೋವನ್ನು ಹಾಕಲು ನಗರದಲ್ಲಿ ಸೂಕ್ತ ಸ್ಥಳವನ್ನು ಗುರುತಿಸಬೇಕು” ಎಂದು ಬೊಮ್ಮಾಯಿ ಸಭೆಯಲ್ಲಿ ಹೇಳಿದರು.