ರಾಜ್ಯ ಬಿಜೆಪಿಯು ಚುನಾವಣೆಯಲ್ಲಿ ಬಹುಮತ ಪಡೆಯಲು ಇದೇ ಮೇ 6ರಂದು ಬೆಂಗಳೂರಿನಲ್ಲಿ ರಾಜ್ಯಾದ್ಯಂತ ಪ್ರಧಾನಿ ಮೋದಿಯಾಗಿ ಹೈಕಮಾಂಡ್ ನಾಯಕರನ್ನು ಕರೆತಂದು ಭರ್ಜರಿ ಪ್ರಚಾರ ನಡೆಸುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಪರ 35 ಕಿಲೋ ಮಿಟರ್ ಭರ್ಜರಿ ರೋಡ್ ಶೊ ನಡೆಸಲಿದ್ದಾರೆ.ಆದರೆ ಪ್ರಧಾನಿ ರೋಡ್ ಶೋಗೆ ಜನರು ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಅಭಿವೃದ್ಧಿ ಮಾಡಿದ್ದೇ ಆದಲ್ಲಿ ಜನರೆ ಆ ಪಕ್ಷಕ್ಕೆ ಮತ ನೀಡುತ್ತಾರೆ. ಅದನ್ನು ಬಿಟ್ಟು ಹೀಗೆ ರೋಡ್ ಶೋಗೆ ಅನುಮತಿ ನೀಡುವ ಮೂಲಕ ಜನರ ದೈನಂದಿನ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ? ಎಂದು ಜನರು ಪ್ರಶ್ನಿಸಿದ್ದಾರೆ.ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ, ಮೆರವಣಿಗೆ ಇವುಗಳೇನು ಇಲ್ಲದಿದ್ದರೂ ಸಹ ಜನರು ನಿತ್ಯ ಸಂಚಾರ ದಟ್ಟಣೆ ಅನುಭವಿಸುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದ ನಗರದಲ್ಲಿ ಕನಿಷ್ಠ 100 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಇದರಿಂದಲೂ ಸಹ ವಾಹನ ಸವಾರರಿಗೆ ಅಲ್ಪಮಟ್ಟಿಗೆ ತೊಂದರೆ ಆಗುತ್ತಿದೆ.