ಮೊನ್ನೆ ಸಿಟಿ ರೌಂಡ್ಸ್ ವೇಳೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡದ ಅಧಿಕಾರಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದರು. ಕೊನೆಗೂ ಎಚ್ಚೆತ್ತುಕೊಂಡ BBMP. ಕಳೆದ ನಾಲ್ಕೈದು ವರ್ಷದಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ತೆರವು ಕಾರ್ಯ ಮತ್ತೆ ಆರಂಭವಾಗಿದೆ. ರಾಜಕಾಲುವೆ ಒತ್ತುವರಿಯಿಂದಾಗಿ ನಗರದೆಲ್ಲೆಡೆ ಜಲಪ್ರಳಯವಾಗಿತ್ತು. ಇಂದಿನಿಂದ ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. BBMP 714 ಕಟ್ಟಡಗಳ ತೆರವು ಕಾರ್ಯಚರಣೆಗಿಳಿದಿದೆ. ವರ್ತೂರು ಕೋಡಿ ಹಾಗೂ ದೊಡ್ಡಬೊಮ್ಮಸಂದ್ರದ ಬಳಿ ಜೆಸಿಬಿಗಳು ಘರ್ಜಿಸುತ್ತಿವೆ.