ಬೆಂಗಳೂರಿಗರಿಗೆ ಭಾರಿ ಶಾಕ್ ನೀಡಲು ಬಿಬಿಎಂಪಿ ಸಿದ್ದತೆ ರೋಡ್ ಟ್ಯಾಕ್ಸ್ ಪಾವತಿಸಿದ್ದರೂ, ಇದ್ಯಾವುದು ಹೊಸ ತೆರಿಗೆ ಎನ್ನುವ ವಿಚಾರ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಲಾರಂಭಿಸಿದೆ. ಮೊದಲೇ ಪಾರ್ಕಿಂಗ್ ಸಮಸ್ಯೆ ಬೆಂಗಳೂರಿನಲ್ಲಿ ಕಾಡುತ್ತಿದೆ, ಈಗ ತೆರಿಗೆಯ ರೂಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ಬಳಸಲೂ ಟ್ಯಾಕ್ಸ್ ಪಾವತಿಸುವ ಅನಿವಾರ್ಯತೆಗೆ ಸಾರ್ವಜನಿಕರು ಸಿಲುಕುವ ಸಾಧ್ಯತೆಯಿದೆ. ಸಾರ್ವಜನಿಕರು ಬಾಡಿಗೆ ಮತ್ತು ಇತರ ಖರ್ಚುಗಳ ಜೊತೆಗೆ ಪಾರ್ಕಿಂಗ್ ದರವನ್ನೂ ತಿಂಗಳ ಖರ್ಚುಲೆಕ್ಕದ ಪಟ್ಟಿಗೆ ಸೇರಿಸಬೇಕಾಗುತ್ತದೆ.