ಬೆಂಗಳೂರಿನಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿ ಗಲಾಟೆ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಒಂದು ತಿಂಗಳ ಕಾಲ ಆರೋಪಿಗಳು ಕರಪತ್ರಗಳನ್ನು ಕರಪತ್ರ ಹಂಚಿರುವ ಮಾಹಿತಿ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸುವ ವೇಳೆ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು ಈ ತೀರ್ಪನ್ನು ವಿರೋಧಿಸಿ ನಾವು ಗಲಾಟೆ ಮಾಡಬೇಕು. ಪ್ರತಿಭಟನೆ ಮಾಡಬೇಕು. ನಿರಂತರವಾಗಿ ಪ್ರತಿಭಟನೆಗಳು ನಡೆಯಬೇಕು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಧ್ವಂಸ ಮಾಡಲು ಪಿಎಫ್‍ಐ ಷಡ್ಯಂತ್ರ ರೂಪಿಸಿತ್ತು ಎಂಬುದನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ATS) ಬಹಿರಂಗಪಡಿಸಿತ್ತು. ರಾಮಮಂದಿರ ಧ್ವಂಸ ಮಾಡಿ ಅದರ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲು ಪಿಎಫ್‍ಐ ಪ್ಲಾನ್ ಮಾಡಿತ್ತು. ಅಷ್ಟೇ ಅಲ್ಲದೇ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಅವರು ಯೋಜಿಸಿದ್ದರು ಎನ್ನಲಾಗಿದೆ.