ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗುತ್ತಿರುವ ಸಾವು ನೋವುಗಳು ಕಣ್ಣಿಗೆ ಕಾಣುತ್ತಲೆ ಇವೆ. ಆದರೂ ಮಾತ್ರ ಬಿಬಿಎಂಪಿ ಮಾತ್ರ ತನ್ನ ಕೆಲಸ ಮುಗಿಸುತ್ತಿಲ್ಲ. ಅಕ್ಟೋಬರ್ 30 ರಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ನವೆಂಬರ್ 5 ರೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ಈಗ ಮತ್ತೆ ಗಡುವು ವಿಸ್ತರಿಸಿಕೊಂಡಿದೆ.ನಗರದಲ್ಲಿ ಸುರಿದ ಮಳೆಯಿಂದಾಗಿ ರಸ್ತೆ ಗುಂಡಿಗಳನ್ನು ತುಂಬುವ ಕೆಲಸ ಮತ್ತಷ್ಟು ವಿಳಂಬವಾಗಿದೆ ನವೆಂಬರ್ 20ರ ಒಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.