ಸೇವೆ ಅನ್ನೊದು ಸಮಾಜಕ್ಕೆ ಪೂರಕವಾಗಿರಬೇಕು. ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಬೆಂಗಳೂರಿನ ಎನ್ಜಿಓ ತಂಡವೊಂದು ಯೂತ್ ಫಾರ್ ಪರಿವರ್ತನ್ ನಗರದ ಬಹುತೇಕ ಕಡೆ ಸ್ವಚ್ಛತೆ ಮಾಡುವುದರ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಸ್ಥಳೀಯರು ಅಷ್ಟೇ ಅಲ್ಲ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1 ನಿಮಿಷಕ್ಕೂ ಹೆಚ್ಚು ಸಮಯ ಈ ಎನ್ಜಿಓ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿದ್ದಾರೆ..