ಬೆಂಗಳೂರಿನ ಪೋಸ್ಟ್ ಮಾಸ್ಟರ್ ಕೆಲಸಕ್ಕೆ ವಿಶ್ವದ ಅತಿದೊಡ್ಡ ಸಂಸ್ಥೆ ಮೈಕ್ರೋಸಾಫ್ಟ್ ಸಹಸ್ಥಾಪಕ ಬಿಲ್ ಗೇಟ್ಸ್ ಫಿದಾ ಆಗಿದ್ದು, ಭಾರತದ ಡಿಜಿಟಲೀಕರಣಕ್ಕೆ ಮನಸೋತಿದ್ದಾರೆ. ಅಲ್ಲದೇ ಭಾರತದ ಡಿಜಿಟಲೀಕರಣ ಹಾಗೂ ಬೆಂಗಳೂರಿನ ಪೋಸ್ಟ್ ಮಾಸ್ಟರ್ ಬಗ್ಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ ಬಗ್ಗೆ ಬಿಲ್ ಗೇಟ್ಸ್ ಅವರ ಮೆಚ್ಚುಗೆ ಮಾತಿನ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಶತಕೋಟಿ ಒಡೆಯ ಬಿಲ್ ಗೇಟ್ಸ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಬೆಂಗಳೂರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾರನ್ನು ಹೊಗಳಿದ್ದಾರೆ. ಜೊತೆಗೆ ಆಕೆಯನ್ನು ಭೇಟಿಯಾದ ಸಂದರ್ಭದಲ್ಲಿ ನಗುನಗುತ್ತಾ ಮಾತನಾಡುತ್ತಿರುವ ಫೋಟೋ ಅಲ್ಲದೇ ಕುಸುಮಾ ಮಾಡುವ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಸಲುವಾಗಿ ಒಂದು ಲಿಂಕ್ ಅನ್ನು ಸಹಾ ಪೋಸ್ಟ್ ಮಾಡಿದ್ದಾರೆ. ಬಿಲ್ ಗೇಟ್ಸ್ ತಮ್ಮ ಲಿಂಕ್ಡ್ ಇನ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.