ಈ ಅಧಿಕಾರಿಗಳು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಚುನಾವಣಾ ಸಂಬಂಧಿತ ಚಟುವಟಿಕೆಗಳಿಗೆ ಗುರುತಿನ ಚೀಟಿ ನೀಡುವುದನ್ನು ನಿರ್ಬಂಧಿಸುವ ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಗುರುತಿನ ಚೀಟಿ ನೀಡಿ ಅಕ್ರಮಕ್ಕೆ ಕಾರಣರಾಗಿದ್ದಾರೆ. ನಗರದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮತದಾರರ ದತ್ತಾಂಶ ಸಂಗ್ರಹಿಸುವಲ್ಲಿ ಸರ್ಕಾರೇತರ ಸಂಸ್ಥೆ ಚಿಲುಮೆ ತೊಡಗಿಸಿಕೊಂಡಿತ್ತು. ಬಳಿಕ ಈ ಸಂಸ್ಥೆ ಸದಸ್ಯರು, ಮುಖ್ಯಸ್ಥರು ಬಿಬಿಎಂಪಿ ಹಾಕಿದ್ದ ಷರತ್ತು ಉಲ್ಲಂಘಿಸಿದ ಅಕ್ರಮ ಮಾಹಿತಿ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡಿದ್ದರು.
ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಂಬಂಧಿತ ಕರ್ತವ್ಯಗಳ ಉಸ್ತುವಾರಿ ವಹಿಸಿದ್ದ ನಾಲ್ವರು ಕಂದಾಯ ಅಧಿಕಾರಿಗಳು ಅಮಾನತುಗೊಂಡಿದ್ದಾರೆ.ಬಿಬಿಎಂಪಿ ಬರೆದ ಪತ್ರವನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆಯ ನಾಲ್ವರು ಚುನಾವಣಾ ನೋಂದಣಿ ಅಧಿಕಾರಿಗಳಾದ ಚಂದ್ರಶೇಖರ್ (ಮಹದೇವಪುರ), ವಿ.ಬಿ.ಭೀಮಾಶಂಕರ್ (ಚಿಕ್ಕಪೇಟೆ), ಸುಹೇಲ್ ಅಹಮದ್ ಮತ್ತು ಗುಲ್ತಾಜ್ ಫಾತಿಮಾ (ಶಿವಾಜಿನಗರ) ಅಮಾನತುಗೊಳಿಸಲಾಗಿದೆ.