ಬೆಳಗಾವಿಯಲ್ಲಿ ಡಬಲ್‌ಇಂಜಿನ ಸರ್ಕಾರವೇ ಮೇಲುಗೈ ಸಾಧಿಸಲಿದ್ದು, ಭಾರತೀಯ ಜನತಾ ಪಕ್ಷದ ಅಭಿವೃದ್ಧಿ ಕಾರ್ಯಗಳು ಈ ಬಾರಿಯ ಚುನಾವಣೆಯಲ್ಲಿ ಶ್ರೀ ರಕ್ಷೆಯಾಗಲಿವೆ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಸಂಪೂರ್ಣ ಒತ್ತಾಸೆಯೊಂದಿಗೆ ಬೆಳಗಾವಿ ಉತ್ತರದಲ್ಲಿ ಡಾ. ರವಿ ಪಾಟೀಲ ಅವರನ್ನು ಗೆಲ್ಲಿಸುವಂತೆ ಶಾಹುನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ ಸಾವಂತ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಹಾರಾಷ್ಟ್ರ ಶಾಸಕ ಗಿರೀಶ ಮಹಾಜನ ,ಉಪಮಹಾಪೌರೆ ರೇಷ್ಮಾ ಪಾಟೀಲ್,ಭಾಜಪ ಮುಖಂಡ ಕಿರಣ ಜಾಧವ ಉಪಸ್ಥಿತರಿದ್ದರು.