ಮಹಾರಾಷ್ಟ್ರ ಸದನದಲ್ಲಿ ಕರ್ನಾಟಕ ವಿರುದ್ಧ ನಿರ್ಣಯ ಪಾಸ್ ಮಾಡಲಾಗಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿ 865 ಹಳ್ಳಿಗಳು ಮಹಾರಾಷ್ಟ್ರ ಕ್ಕೆ ಸೇರಬೇಕು. ಮರಾಠಿ ಭಾಷಿಕರ ಪ್ರದೇಶಗಳ ಒಂದ ಇಂಚು ಜಾಗವನ್ನು ನಾವು ಬಿಟ್ಟು ಕೊಡುವುದಿಲ್ಲ. ಕೇಂದ್ರ ಸರ್ಕಾರ ಬೆಳಗಾವಿ ಸೇರಿ 865 ಹಳ್ಳಿಗಳನ್ನ ಮಹಾರಾಷ್ಟ್ರ ಸೇರ್ಪಡೆ ಮಾಡಲು ಸಹಕಾರ ನೀಡುವಂತೆ ಸದನದಲ್ಲಿ ಠರಾವ್ ಪಾಸ್ ಮಾಡಲಾಗಿದೆ. ಕರ್ನಾಟಕ ವಿಧಾನ ಸಭೆಯಲ್ಲಿ ತಗೆದುಕೊಂಡ ತೀರ್ಮಾನಕ್ಕೆ ವಿರೋಧವಿದೆ, ಧಿಕ್ಕಾರವಿದೆ ಎಂದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ತಿಳಿಸಿದರು.