ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಬಿಜೆಪಿಯ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಧಿಕಾರ ಅವರಿಗೆ ಕೊಟ್ಟಿದು ಯಾರು. ಬೊಮ್ಮಾಯಿ ಅವರ ಆಡಳಿತ ನೋಡಿ ಕಾಂಗ್ರೆಸ್‍ನವರಿಗೆ ತಲೆ ಕೆಟ್ಟಿದೆ. ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸ ನೋಡಿ ಕಾಂಗ್ರೆಸ್‍ಗೆ ಭಯ ನಡುಕ ಆಗುತ್ತಿದೆ. ಹೀಗಾಗಿ ಕಾಂಗ್ರೆಸ್‍ನವರು ಹೀಗೆ ಮಾತನಾಡುತ್ತಿದ್ದಾರೆ ಜನ ಕಾಂಗ್ರೆಸ್‍ನವರ ಮಾತು ಕೇಳಿ ನಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.