ಬೋರ್‌ವೆಲ್ ಕೊರೆಯುವ ಮತ್ತು ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿ ಹಣಕಾಸು ಅವ್ಯವಹಾರ, ಬಿಬಿಎಂಪಿಗೆ ಇಡಿ ನೋಟಿಸ್, ಮಾಹಿತಿ ನೀಡಲು ಸೂಚನೆ

ಬೋರ್‌ವೆಲ್ ಕೊರೆಯುವ ಮತ್ತು ನೀರು ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಿಬಿಎಂಪಿ ಗೆ ನೋಟಿಸ್ ನೀಡಿದೆ.2016 ಮತ್ತು 2019ರ ನಡುವೆ ಪ್ರತಿ ವಾರ್ಡ್‌ನಲ್ಲಿ ಎಷ್ಟು ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ ಮತ್ತು ಆರ್‌ಒಗಳನ್ನು ಸ್ಥಾಪಿಸಲಾಗಿದೆ ಎಂಬ ಮಾಹಿತಿ ನೀಡಬೇಕು. ಜೊತೆಗೆ ಪ್ರಕರಣದಲ್ಲಿ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಶಾಮೀಲಾಗಿದ್ದರೆ, ಅವರ ಪಾತ್ರ ಇರುವುದು ಕಂಡು ಬಂದಲ್ಲಿ ಅಂತವರ ಮಾಹಿತಿ ನೀಡುವಂತೆ ಕೋರಿದೆ.ಇದರಲ್ಲಿ ಬಿಬಿಎಂಪಿಯ ಐದು ವಲಯಗಳಾದ ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಕಾರ್ಪೊರೇಟರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ತನಿಖೆ ನಡೆಸುತ್ತಿದೆ.ಬಿಜೆಪಿ ವಕ್ತಾರ ಎನ್‌.ಆರ್ ರಮೇಶ್ ಅವರು ಮೇ 2019 ರಲ್ಲಿ ಬಿಬಿಎಂಪಿಯಲ್ಲಿ ಬೋರ್‌ವೆಲ್‌ಕೊರೆದು ಆರ್‌ಒ ಸ್ಥಾಪನೆಯಲ್ಲಿ ಒಟ್ಟು ಸುಮಾರು 400 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *