ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವುದನ್ನು ನಿಲ್ಲಿಸಬೇಕು- ಬಹಿರಂಗ ಸಭೆಯಲ್ಲೇ ಪಾಕ್‌ಸಚಿವನಿಗೆ ಖಡಕ್ಕಾಗಿ ಪಂಚ್‌ಕೊಟ್ಟ ಜೈಶಂಕರ್‌

ಭಾರತದ ನೇತೃತ್ವದಲ್ಲಿ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆ ಗೋವಾದಲ್ಲಿ ಆರಂಭವಾಗಿದೆ. ಪಾಕ್ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ ಕೂಡ ಇದ್ರಲ್ಲಿ ಪಾಲ್ಗೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡವೆ ದ್ವಿಪಕ್ಷೀಯ ಮಾತುಕತೆ ಇಲ್ಲ ಎಂದು ಮೊದಲೇ ನಿರ್ಧಾರವಾದ ಕಾರಣ, ಮರ್ಯದಾಪೂರ್ವಕವಾಗಿ ಭಾರತ ವಿದೇಶಾಂಗ ಮಂತ್ರಿ ಜೈಶಂಕರ್ ಮತ್ತು ಪಾಕ್ ವಿದೇಶಾಂಗ ಮಂತ್ರಿ ಬಿಲಾವಲ್ ಭುಟ್ಟೋ ಭೇಟಿ ನಡೆದಿದೆ. ಇಬ್ಬರು ಜೊತೆಯಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬಳಿಕ ನಡೆದ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವುದನ್ನು ನಿಲ್ಲಿಸಬೇಕು ಎಂಬ ದೃಢ ನಿಲುವನ್ನು ಪ್ರಕಟಿಸಿದ್ದಾರೆ. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ-ಜರ್ದಾರಿ ಅವರ ಉಪಸ್ಥಿತಿಯಲ್ಲಿಯೇ ಜೈಶಂಕರ್‌ಖಡಕ್ಕಾಗಿ ಮಾತನಾಡಿದ್ದಾರೆ.’ನಮ್ಮ ಕಣ್ಮುಂದೆಯೇ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳ ಬಗ್ಗೆ ಗಮನ ಹರಿಸದಿದ್ದಲ್ಲಿ ಅದು ಸದಸ್ಯ ರಾಷ್ಟ್ರಗಳ ಭದ್ರತೆಗೆ ಅಪಾಯವಾಗಿ ಪರಿಣಮಿಸುತ್ತದೆ. ಅಂದೊಂದು ದಿನ ಇಡೀ ವಿಶ್ವವೇ ಕೋವಿಡ್‌ವಿರುದ್ಧ ಹೋರಾಡುತ್ತಿತ್ತು. ಆಗಲೂ ಕೆಲವೆಡೆ ಭಯೋತ್ಪಾದನೆಯ ಚಟುವಟಿಕೆ ನಿಂತಿರಲಿಲ್ಲ. ಭಯೋತ್ಪಾದನೆಯನ್ನ ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಿಕೊಳ್ಳಳಾಗುವುದಿಲ್ಲ. ಇಂತಹ ಬೆದರಿಕೆಗಳ ವಿರುದ್ಧ ಹೋರಾಟ ನಡೆಸುವುದೇ ಶಾಂಘೈ ಸಂಗಟನೆಯ ಮೂಲ ಉದ್ದೇಶ ಎಂದು ಜೈಶಂಕರ್‌ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ಪಾಕ್‌ವಿದೇಶಾಂಕ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಸಹ ಮಾತನಾಡಿ, ‘ಭಯೋತ್ಪಾದನೆ ಜಾಗತಿಕ ಭದ್ರತೆಗೆ ಅಪಾಯಕಾರಿಯಾಗಿದೆ. ಇದರ ವಿರುದ್ಧ ಹೋರಾಡುವುದು ನಮ್ಮ ಜಂಟಿ ಹೊಣೆಗಾರಿಕೆಯಾಗಿದೆ. ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *