ಸಿಂಧ್ ಪ್ರಾಂತ್ಯದಿಂದ ಭಾರತಕ್ಕೆ ಆಗಮಿಸಲು ವಾಘಾ ಗಡಿಗೆ ಬಂದ 180 ಹಿಂದೂಗಳನ್ನು ಪಾಕಿಸ್ತಾನ ಅಧಿಕಾರಿಗಳು ತಡೆದಿದ್ದಾರೆ. ಧಾರ್ಮಿಕ ಕಾರಣದ ಅಡಿಯಲ್ಲಿ 180 ಹಿಂದೂಗಳು ವೀಸಾ ಪಡೆದುಕೊಂಡಿದ್ದಾರೆ. ಪಾಸ್‌ಪೋರ್ಟ್ ವೀಸಾ ಸೇರಿದಂತೆ ಎಲ್ಲಾ ದಾಖಲೆ ನೀಡಿದರೂ ಪಾಕಿಸ್ತಾನ ಅಧಿಕಾರಿಗಳು ಹಿಂದೂಗಳನ್ನು ತಡೆದಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಹಿಂದೂಗಳ ಕುಟುಂಬಗಳು ಇದೀಗ ಗಡಿಯಲ್ಲೆ ದಿನಕಳೆಯುವಂತಾಗಿದೆ. ಹಿಂದೂಗಳು ಭಾರತಕ್ಕೆ ತೆರಳುವ ಕುರಿತು ಸ್ಪಷ್ಟ ಕಾರಣ ನೀಡಿಲ್ಲ. ಹೀಗಾಗಿ ಅಧಿಕಾರಿಗಳು ತಡೆದಿದ್ದಾರೆ.