ಇನ್ಫೋಸಿಸ್‌ಸೈನ್ಸ್‌ಫೌಂಡೇಶನ್‌ವತಿಯಿಂದ 6 ಮಂದಿ ಗಣ್ಯರಿಗೆ ಇನ್ಫೋಸಿಸ್‌ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಇನ್ಫೋಸಿಸ್‌ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು, ಭಾರತದಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್‌ನಿಂದಾಗಿ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದು, ಅದು ದೇಶಕ್ಕೆ ಆದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.
100 ಕೋಟಿ ಕೋವಿಡ್19 ಲಸಿಕೆಗಳನ್ನು ತಯಾರಿಸಿದ ಮತ್ತು ಸರಬರಾಜು ಮಾಡಿದ ಕಂಪೆನಿಗಳನ್ನು ಶ್ಲಾಘಿಸಿದ ನಾರಾಯಣಮೂರ್ತಿ ಇದು ಅದ್ಭುತ ಸಾಧನೆಯಾಗಿದೆ. ಆದರೆ ಇಲ್ಲಿ ಉತ್ಪಾದಿಸಿದ ಕೆಮ್ಮು ಸಿರಪ್‌ನಿಂದ 66 ಮಕ್ಕಳು ಸಾವನ್ನಪ್ಪಿದ್ದು ಮಾತ್ರ ಖಂಡನೀಯ ಅವಮಾನ ಎಂದು ಹೇಳಿದರು.