ಡೆಲವೇರ್ ನ ರೆಹೋಬೋತ್ ಬೀಚ್‍ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ನಾನು ಅವರನ್ನು ನೋಡಲು ಭಾರತಕ್ಕೆ ಹೋಗುತ್ತಿದ್ದೇನೆ. ಅವರು ಬಾರದಿರುವುದು ನನಗೆ ತೀವ್ರ ಬೇಸರವಾಗಿದೆ. ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಭಾಗವಹಿಸದಿರುವುದು ತೀವ್ರ ಬೇಸರ ತಂದಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇದೇ ವೇಳೆ ಏಷ್ಯಾದಲ್ಲಿ ಅಮೆರಿಕಾದ ಸಂಬಂಧಗಳನ್ನು ಬಲಪಡಿಸಲು ವಿಯೆಟ್ನಾಂಗೆ ಪ್ರವಾಸವನ್ನು ಕೈಗೊಳ್ಳಲಿದೆ. ಭಾರತ ಮತ್ತು ವಿಯೆಟ್ನಾಂ ಯುನೈಟೆಡ್ ಸ್ಟೇಟ್ಸ್ ನೊಂದಿಗೆ ಹೆಚ್ಚು ನಿಕಟ ಸಂಬಂಧಗಳನ್ನು ಬಯಸುತ್ತಾರೆ ಮತ್ತು ಅದು ತುಂಬಾ ಸಹಾಯಕವಾಗಬಹುದು ಎಂದು ಬೈಡೆನ್ ಹೇಳಿದರು.