ಭಾರತದಲ್ಲಿ ರೂಪಾಯಿ ನೋಟಿನಲ್ಲಿನ ಫೋಟೋ ವಿವಾದ ಜೋರಾಗುತ್ತಿದೆ. ಹಿಂದೂ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾರತೀಯ ರೂಪಾಯಿಗಳಲ್ಲಿ ಲಕ್ಷ್ಮಿ ಹಾಗೂ ಗಣೇಶನ ಫೋಟೋ ಹಾಕಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ವಿವಾದದ ಬೆನ್ನಲ್ಲೇ ಅಂಬೇಡ್ಕರ್ ಫೋಟೋ ಯಾಕಾಗಬಾರದು ಎಂದು ಕಾಂಗ್ರೆಸ್ ಪ್ರಶ್ನಿಸಿದರೆ, ಶಿವಾಜಿ ಫೋಟೋ ಇರಲಿ ಎಂದು ಬಿಜೆಪಿ ನಾಯಕರು ಕೇಜ್ರಿವಾಲ್ ಕುಟುಕಿದ್ದಾರೆ. ಈ ವಾದ ವಿವಾದಗಳ ನಡುವೆ ಇದೀಗ ಭಾರತೀಯ ಕರೆನ್ಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಇರಲಿ ಅನ್ನೋ ವಾದ ಹುಟ್ಟಿಕೊಂಡಿದೆ. ಬಿಜೆಪಿ ಶಾಸಕ ಹಾಗೂ ವಕ್ತಾರ ರಾಮ್ ಕದಮ್ ಹೊಸ ವಾದ ಮುಂದಿಟ್ಟಿದ್ದಾರೆ. ಉಳಿದೆಲ್ಲರ ಫೋಟೋಗಿಂತ ಪ್ರಧಾನಿ ನರೇಂದ್ರ ಮೋದಿ ಪೋಟೋ ಹೆಚ್ಚು ಸೂಕ್ತ ಎಂದು ರಾಮ್ ಕದಮ್ ಅಭಿಪ್ರಾಯಪಟ್ಟಿದ್ದಾರೆ.