12 ಪ್ರಯಾಣಿಕರೊಂದಿಗೆ ಭಾರತದಿಂದ ಹೊರಟಿದ್ದ ಚಾರ್ಟರ್ ವಿಮಾನವೊಂದು ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಪಾಕಿಸ್ತಾನದ ಕರಾಚಿಯಲ್ಲಿ ಇಳಿದ ಸ್ವಲ್ಪ ಸಮಯದ ನಂತರ ಪ್ರಯಾಣಿಕರನ್ನು ಕರೆತರಲು ಮತ್ತೊಂದು ವಿಮಾನವನ್ನು ಕಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿತ್ತು. ಆದರೆ, ಈ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಏಕೆ ಇಳಿದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾಗರಿಕ ವಿಮಾನಯಾನ ಪ್ರಾಧಿಕಾರ ಈ ಘಟನೆಯನ್ನು ದೃಢಪಡಿಸಿದೆ.