ಶ್ರೀಲಂಕಾದ ಹಂಬನತೋಟ ಬಂದರಿಗೆ ಯುವಾನ್ ವಾಂಗ್ 5 ನೌಕೆ ಚೀನಾದ ಬೇಹುಗಾರಿಕೆ ನೌಕೆ ಬಂದಿಳಿದದ್ದು ಇದು ಸೆಟಿಲೈಟ್ ಮತ್ತು ಕ್ಷಿಪಣಿಗಳ ಮಾಹಿತಿ ಕದಿಯಬಲ್ಲುದು. ಭಾರತ ನಡೆಸುವ ಕ್ಷಿಪಣಿ ಪರೀಕ್ಷೆಗಳ ನಿಖರ ಮಾಹಿತಿಯನ್ನು ಇಲ್ಲಿಂದ ಪಡೆಯಲು ಸಾಧ್ಯ.ಭಾರತಕ್ಕೆ ಅಸಮಾಧಾನ ಉಂಟು ಮಾಡಿದೆ. ಪದೇ ಪದೇ ಭಾರತ ಎತ್ತಿದ ಆಕ್ಷೇಪಗಳ ಮಧ್ಯೆಯೂ ಶ್ರೀಲಂಕಾ ಚೀನಾ ನೌಕೆ ಆಗಮಿಸಲು ಅನುಮತಿ ನೀಡಿತ್ತು. ಆಗಸ್ಟ್ 22ರವರೆಗೂ ಇಲ್ಲಿದ್ದು ಆನಂತರ ನಿರ್ಗಮಿಸುತ್ತದೆ ಎಂದು ಹೇಳಿತ್ತು. ನಿಗದಿತ ದಿನದಂದೇ ಯುವಾನ್ ವಾಂಗ್ 5 ನೌಕೆ ನಿರ್ಗಮಿಸಿತು.