ಪ್ರಧಾನಿ ನರೇಂದ್ರ ಮೋದಿ ಅವರ ಈಜಿಪ್ಟ್ ಪ್ರವಾಸ ಸಕ್ಸಸ್ ಆಗಿದೆ. ಹಾಗೇ ಈ ಪ್ರವಾಸ ಮತ್ತೊಂದು ಮಹತ್ವದ ಘಟನೆಗೂ ವೇದಿಕೆ ಒದಗಿಸಿತ್ತು. ಅಮೆರಿಕದಲ್ಲಿ ಭರ್ಜರಿ ಸ್ವಾಗತ ಪಡೆದ ಭಾರತದ ಪ್ರಧಾನಿಗೆ, ಈಜಿಪ್ಟ್ ಕೂಡ ಜೈ ಎಂದಿದೆ. ಇಷ್ಟೇ ಅಲ್ಲ, ತನ್ನ ದೇಶ ಅಂದರೆ ಈಜಿಪ್ಟ್‌ನ ಅತ್ಯುನ್ನತ ಗೌರವ ‘ಆರ್ಡರ್‌ಆಫ್‌ದಿ ನೈಲ್’ ನೀಡಿ ಪ್ರಧಾನಿ ಮೋದಿ ಅವರನ್ನ ಗೌರವಿಸಿದೆ.
ಭಾರತ ಮತ್ತು ಈಜಿಪ್ಟ್‌ಸಂಬಂಧ ಮೊದಲಿನಿಂದ ಉತ್ತಮವಾಗಿದೆ. ಈ ಕಾರಣಕ್ಕೆ ಬಂಡವಾಳ ಹೂಡಿಕೆ, ನವೀಕರಿಸಬಹುದಾದ ಇಂಧನ, ಐಟಿ, ಡಿಜಿಟಲ್ ಪಾವತಿಯು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕಿವೆ. ಹಲವು ಮಹತ್ವದ ಸಭೆಗಳನ್ನು ಪ್ರಧಾನಿ ಈ ವೇಳೆ ನಡೆಸಿದ್ದಾರೆ.ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಕುರಿತು ಇತ್ತಿಹಾದಿಯಾ ಅರಮನೆಯಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್‌ಫತ್ತಾಹ್‌ಅಲ್‌ಜೊತೆ ಮಾತುಕತೆ ನಡೆಸಿದರು. ಪ್ರಧಾನಿ ಮೋದಿ ಅವರಿಗೆ ಈ ವೇಳೆ ಅತ್ಯುನ್ನತ ಗೌರವ ಪ್ರಶಸ್ತಿ ನೀಡಿದೆ. ಅಂದಹಾಗೆ ಈಜಿಪ್ಟ್ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿರುವ ತನ್ನ ದೇಶದ ಅತ್ಯುನ್ನತ ಗೌರವ ‘ಆರ್ಡರ್‌ಆಫ್‌ದಿ ನೈಲ್’ಗೆ ಸುಮಾರು 100 ವರ್ಷಗಳ ಇತಿಹಾಸ ಇದೆ. ಈ ಗೌರವ ಪುರಸ್ಕಾರವನ್ನು ಈಜಿಪ್ಟ್ ದೇಶವು 1925ರಲ್ಲಿ ಸ್ಥಾಪಿಸಿತ್ತು. ಈಗ ಭಾರತದ ಪಿಎಂ ಮೋದಿ ಅವರಿಗೂ ‘ಆರ್ಡರ್‌ಆಫ್‌ದಿ ನೈಲ್’ ಪ್ರದಾನ ಮಾಡಲಾಗಿದೆ. 1997ರ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಹೀಗೆ 26 ವರ್ಷಗಳ ನಂತರ ಈಜಿಪ್ಟ್‌ಗೆ ಭೇಟಿ ನೀಡಿರುವ ಭಾರತದ ಪ್ರಧಾನಿಗೆ ತನ್ನ ದೇಶದಲ್ಲಿನ ಅತ್ಯುನ್ನತ ಗೌರವ ನೀಡಿ ಗೌರವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು 13ನೇ ಅತ್ಯುನ್ನತ ಗೌರವ ಪುರಸ್ಕಾರ ಎಂಬುದು ಮತ್ತೊಂದು ವಿಶೇಷವಾಗಿದೆ.