ಭಾರತಕ್ಕೆ ಮರೆಯಲಾಗದ ಹಾಗೂ ಮಹತ್ವದ ಭೇಟಿಯಿಂದ ಹಿಂತಿರುಗಿ. ಶೀಘ್ರದಲ್ಲೇ ಈ ಅದ್ಭುತ ದೇಶಕ್ಕೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ. ಅವಿಸ್ಮರಣೀಯ ಭಾರತದ ಭೇಟಿ ಎಂದು ಇಸ್ರೇಲ್‍ನ ಸರ್ಕಾರಿ ಅಧಿಕಾರಿ ಲಿಯರ್ ಹೈಯತ್ ಟ್ವೀಟ್ ಮಾಡಿ.ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಚರ್ಚೆ ನಡೆಸುತ್ತಿರುವುದು ಹಾಗೂ ಎರಡನೇ ಫೋಟೋದಲ್ಲಿ ಇಂಡಿಯಾ ಗೇಟ್ ಬಳಿ ನಿಂತಿರುವುದು ಹಾಗೂ ಮೂರನೇ ಫೋಟೋದಲ್ಲಿ ನೆನಪಿನ ಕಾಣಿಕೆಯನ್ನು ಹಿಡಿದಿರುವ ಫೋಟೋ ಇದೆ. ಇದರ ಜೊತೆಗೆ ಇನ್ನೊಂದು ಫೋಟೋವಿದ್ದು, ಅದರಲ್ಲಿ ಹಸುಗಳ ಗುಂಪೊಂದು ಹೋಗುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.