ಆಜಾದಿ ಕಾ ಅಮೃತ್ ಮಹೋತ್ಸವದ ವೇಳೆ ಹಲವು ದಾಳಿಗೆ ಪ್ರಯತ್ನಗಳು ನಡೆದಿದ್ದಿದ್ದವು. ಇವು ವಿಫಲವಾದ ಬೆನ್ನಲ್ಲೇ ಭಾರತದಲ್ಲಿ ನಡೆಸಲು ಸಂಚು ರೂಪಿಸಿದ್ದ ಬಹುದೊಡ್ಡ ಆತ್ಮಾಹುತಿ ದಾಳಿಯ ಸ್ಕೆಚ್ ಬಯಲಾಗಿದೆ. ಭಾರತದ ರಾಜಕೀಯ ನಾಯಕರೊಬ್ಬರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದ್ದ ಆತ್ಮಾಹುತಿ ದಾಳಿಕೋರನನ್ನು ರಷ್ಯಾದಲ್ಲಿ ಬಂಧಿಸಲಾಗಿದೆ. ರಷ್ಯಾದ ಫೆಡರಲ್ ಭದ್ರತಾ ಸೇವಾ ಅಧಿಕಾರಿಗಳು ಈ ಉಗ್ರಗಾಮಿಯನ್ನು ಬಂಧಿಸಿದ್ದು, ಆತ ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿದವನು ಎಂದು ತಿಳಿದು ಬಂದಿದೆ.