ಭಾರತದ ಲೋಕಸಭೆ ಚುನಾವಣೆಗೂ ಮೊದಲು ಪ್ರಧಾನಿ ಮೋದಿಗೆ ಶುಭವಾಗಲಿ ಎಂದು ಹಾರೈಸಿ ರಷ್ಯಾಗೆ ಆಹ್ವಾನಿಸಲು ಖುಷಿ ಆಗುತ್ತೆ.ರಷ್ಯಾ ಅಧ್ಯಕ್ಷ ಪುಟಿನ್!

ಭಾರತ & ರಷ್ಯಾ ನಡುವೆ ಅವಿನಾಭಾವ ಸಂಬಂಧ ಇದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ, ಜಗತ್ತಿನಲ್ಲಿ ಮೊದಲು ಸಹಾಯಕ್ಕೆ ಬಂದ ಮೊದಲ ದೇಶ ಅದು ರಷ್ಯಾ. ಅದ್ರಲ್ಲೂ ಈಗಿನ ಕಾಲಘಟ್ಟದಲ್ಲಿ ರಷ್ಯಾ ಪಾಲಿಗೆ ಭಾರತ ಆಪದ್ಬಾಂಧವ. ಅಮೆರಿಕ ಸೇರಿ, ಜಗತ್ತಿನ ಹಲವು ದೇಶಗಳು ರಷ್ಯಾ ವಿರುದ್ಧ ತಿರುಗಿ ಬಿದ್ದ ಬಳಿಕ ಭಾರತವೇ ಮುಂದೆ ಬಂದು ರಷ್ಯಾಗೆ ಸಹಾಯ ಮಾಡುತ್ತಿದೆ. ಹೀಗಿದ್ದಾಗ ರಷ್ಯಾ ಅಧ್ಯಕ್ಷರು ಮಹತ್ವದ ಹೇಳಿಕೆ ನೀಡಿದ್ದಾರೆ.ಇದೀಗ ರಷ್ಯಾ ಪ್ರವಾಸದಲ್ಲಿ ಇರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ಅವರ ಜೊತೆಯಲ್ಲಿ ಪುಟಿನ್ ಮಹತ್ವದ ಚರ್ಚೆಯನ್ನ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ, ಕ್ರೆಮ್ಲಿನ್‌ನ ಕಚೇರಿಯಲ್ಲಿ ಮಾತುಕತೆ ನಡೆದಿದೆ. ಪುಟಿನ್‌ಮಾತನಾಡಿ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರೆ. ಅಲ್ಲದೆ ಜಾಗತಿಕ ಬೆಳವಣಿಗೆ ಮತ್ತು ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಲು ಮುಂದಿನ ವರ್ಷ ದೇಶಕ್ಕೆ ಬನ್ನಿ ಎಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ಪುಟಿನ್‌ಈಗ ಆಹ್ವಾನ ನೀಡಿದ್ದಾರಂತೆ.ನಮ್ಮ ಮಿತ್ರ ನರೇಂದ್ರ ಮೋದಿ ಅವರನ್ನು ರಷ್ಯಾಗೆ ಆಹ್ವಾನಿಸಲು ಖುಷಿ ಆಗುತ್ತೆ. ಹಾಗೇ ಅವರನ್ನು ರಷ್ಯಾದಲ್ಲಿ ನೋಡಲು ನನಗೂ ತುಂಬಾ ಸಂತಸವಾಗುತ್ತೆ ಎಂದಿದ್ದಾರೆ ಪುಟಿನ್.

Leave a Reply

Your email address will not be published. Required fields are marked *