ಭಾರತೀಯ ಮೂಲದ ಬ್ರಿಟನ್‌ಪ್ರಧಾನಿ ರಿಷಿ ಸುನಕ್‌ಸಂಕಷ್ಟದಲ್ಲಿದ್ದಾರೆ. ಪ್ರಧಾನ ಮಂತ್ರಿ ರಿಷಿ ಸುನಕ್ ಅವರನ್ನು ಸಂಸದೀಯ ಮಾನದಂಡಗಳ ಆಯುಕ್ತರು ತನಿಖೆ ಮಾಡಲಿದ್ದಾರೆ. ರಿಷಿ ಸುನಕ್ ಅವರ ಪತ್ನಿ ಹಾಗೂ ಇನ್ಫೋಸಿಸ್‌ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಮಕ್ಕಳ ಆರೈಕೆ ಕಂಪನಿಯಲ್ಲಿ ಹೂಡಿಕೆದಾರರಾಗಿರುವುದು ಇದಕ್ಕೆ ಕಾರಣ. ಹೊಸ ಆರೈಕೆ ಯೋಜನೆಯನ್ನು ಘೋಷಿಸುವಾಗ, ರಿಷಿ ಪ್ರಕಟಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕಮಿಷನರ್ ಡೇನಿಯಲ್ ಗ್ರೀನ್‌ಬರ್ಗ್ ಕಳೆದ ವಾರ ಪ್ರಧಾನಿ ವಿರುದ್ಧ ತನಿಖೆಯನ್ನು ಆರಂಭ ಮಾಡಿದ್ದಾರೆ. ಈ ಮಾಹಿತಿಯನ್ನು ಆಯುಕ್ತರ ವೆಬ್‌ಸೈಟ್ ಮೂಲಕವೂ ಹಂಚಿಕೊಳ್ಳಲಾಗಿದೆ. ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ವಿಚಾರಣೆಯನ್ನು ಸಂಸದರಿಗೆ ಸಂಬಂಧಿಸಿದ ನೀತಿ ಸಂಹಿತೆಯ ಪ್ಯಾರಾ 6 ಗೆ ಸಂಬಂಧಿಸಿದಂತೆ ಮಾತ್ರ ನಡೆಸಲಾಗುತ್ತದೆ. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಮಕ್ಕಳ ಆರೈಕೆ ಅಥವಾ ಶಿಶುಪಾಲನಾ ಸಂಸ್ಥೆಯಲ್ಲಿ ಹೂಡಿಕೆದಾರರಾಗಿದ್ದಾರೆ. ಸರ್ಕಾರದಿಂದ ಈ ಕಂಪನಿ ಲಾಭಗಳನ್ನೂ ಪಡೆಯುತ್ತದೆ. ಈ ಪರಿಸ್ಥಿತಿಯಲ್ಲಿ, ಶಿಶುಪಾಲನಾ ಕಂಪನಿಯಲ್ಲಿ ಅವರ ಪತ್ನಿಯ ಪಾಲು ಸರಿಯಾಗಿ ಘೋಷಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಿಷಿ ಎಲ್ಲಿಯಾದರೂ ನಿಯಮ ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ. ಬ್ರಿಟನ್‌ನ ಸಂಸತ್ತಿನಲ್ಲೂ ವಿರೋಧ ಪಕ್ಷಗಳು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ರಿಜಿಸ್ಟರ್ ಆಫ್ ಇಂಟರೆಸ್ಟ್ ಸಮಯದಲ್ಲಿ, ರಿಷಿ ಸುನಕ್ ತನ್ನ ಪತ್ನಿಯ ಆಸ್ತಿಯನ್ನು ಬಿಡುಗಡೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.