ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಮಧ್ಯಮ ವರ್ಗದ ಜನರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ಇಂದು ಮತ್ತೆ ಬಿಸಿ ಮುಟ್ಟಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋದರವನ್ನು 35 ಮೂಲಾಂಕ ಏರಿಸಿದೆ. ಇದರಿಂದ ರೆಪೋ ರೇಟ್ 6.25ಕ್ಕೆ ಏರಿದೆ. ಇದರಿಂದ ಗೃಹ, ವಾಹನ, ವಾಣಿಜ್ಯ ಸಾಲದ ಬಡ್ಡಿ ದರ ದುಬಾರಿ ಆಗಲಿವೆ. ಕಳೆದ ಮೂರು ಹಣಕಾಸು ನೀತಿಗಳಲ್ಲೂ ಬಡ್ಡಿದರ ಏರಿಕೆ ಪ್ರಮಾಣ ಕ್ರಮವಾಗಿ ಶೇ.0.50 ರಷ್ಟಿತ್ತು. ಪ್ರಸಕ್ತ ಹಣದುಬ್ಬರ ಅಲ್ಪ ಇಳಿಕೆಯಾಗಿದ್ದರೂ, ಇನ್ನೂ ಶೇ.6ಕ್ಕಿಂತಲೇ ಮೇಲೇ ಇರುವ ಕಾರಣ, ಬಡ್ಡಿದರ ಏರಿಕೆ ಮಾಡಲಾಗಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರೆಪೋದರ ಏರಿಕೆ ಮಾಡಲಾಗಿದೆ.