ಕಳೆದ ತಿಂಗಳು ಇದೇ ಸಮಯದಲ್ಲಿ ಪಿಎಂ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಡೀ ಜಗತ್ತು ಆ ಕಡೆ ಕಣ್ಣು ನೆಟ್ಟಿತ್ತು. ಹೀಗೆ ಒಂದು ತಿಂಗಳ ಈ ಸುಂದರ ನೆನಪುಗಳ ಬೆನ್ನಲ್ಲೇ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಭಾರತವು ಎಲ್ಲಾ ಕ್ಷೇತ್ರದಲ್ಲೂ ಗಟ್ಟಿಯಾಗಿ ಬೆಳೆಯುತ್ತಿದೆ. ಹೀಗಾಗಿ ಜಗತ್ತಿನ ಪ್ರತಿಯೊಂದು ದೇಶಕ್ಕೂ ಭಾರತದ ಸಂಬಂಧ ಅತ್ಯಗತ್ಯ. ಅದರಲ್ಲೂ ಅಮೆರಿಕ ಇದೀಗ ಭಾರತದ ಜೊತೆ ಮತ್ತಷ್ಟು ಒಡನಾಟ ಇಟ್ಟುಕೊಳ್ಳಲು ಬಯಸುತ್ತಿದೆ. ಅಮೆರಿಕದ ಖ್ಯಾತ ಸಂಸದರ ಗುಂಪು ಮತ್ತು ಶ್ವೇತಭವನ ಭಾರತ, ಅಮೆರಿಕ ಸಂಬಂಧ ವೃದ್ಧಿ ಬಗ್ಗೆ ಮಾತನಾಡಿದ್ದು, ಭಾರತ-ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಗಟ್ಟಿಯಾಗಿದೆ ಎಂದಿದೆ. ಈ ಮೂಲಕ ಜಗತ್ತಿನ ಶಕ್ತಿಶಾಲಿ ರಾಷ್ಟ್ರವೊಂದು ಭಾರತದ ಜೊತೆ ಸಂಬಂಧವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಮುಂದಾಗಿದೆ. ಅಂದಹಾಗೆ ಸಂಸತ್ತಿನ ಸದಸ್ಯರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರ್ಷಿಕ ಭೋಜನ ಕೂಟ ಆಯೋಜಿಸಿದ್ದರು. ಶ್ವೇತಭವನ ಹುಲ್ಲುಹಾಸಿನಲ್ಲಿ ಆಯೋಜಿಸಿದ್ದ ವಾರ್ಷಿಕ ಭೋಜನ ಕೂಟ ಸಾಕಷ್ಟು ಗಮನ ಸೆಳೆದಿತ್ತು, ಅಲ್ಲದೆ ಹಲವು ಸಂಸದರು ಈ ವೇಳೆ ಹಾಜರಿದ್ದರು. ಆಗಲೇ ಭಾರತ ಮತ್ತು ಅಮೆರಿಕ ಸಂಬಂಧದ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ ಶ್ವೇತಭವನ. ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ಜೀನ್ಪಿಯರ್ಮಾಹಿತಿ ನೀಡಿದ್ದಾರೆ.