ಭಾರತವು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಅಮೆರಿಕ ಹಾಡಿ ಹೊಗಳಿದೆ. ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕಾರ್ಯತಂತ್ರದ ಸಂವಹನ ಸಂಯೋಜಕ ಜಾನ್ ಕಿರ್ಬಿ ವಾಷಿಂಗ್ಟನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.”ಭಾರತ ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಯಾರಾದರೂ ನವದೆಹಲಿಗೆ ಹೋದರೆ ಅದನ್ನು ಸ್ವತಃ ನೋಡಬಹುದಾಗಿದೆ. ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿಯ ಬಗ್ಗೆ ಆರೋಗ್ಯಕರ ಚರ್ಚೆಯಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಜಾನ್ ಕಿರ್ಬಿ ಹೇಳಿದರು. ನರೇಂದ್ರ ಮೋದಿ ಅಮೆರಿಕಗೆ ಭೇಟಿ ನೀಡುವ ಮೊದಲು ಈ ಹೇಳಿಕೆ ಬಂದಿದೆ.ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಪ್ರಪಂಚದಲ್ಲಿ ಯಾವುದೇ ದೇಶದ ಮೇಲೆ ನಾವು ಹೊಂದಿರುವ ಕಾಳಜಿಯನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಈ ಭೇಟಿ ನಿಜವಾಗಿಯೂ ಈಗ ಇರುವ ಸಂಬಂಧವನ್ನು ಮುಂದುವರೆಸುವ ಕುರಿತಾಗಿದೆ ಮುಂದೆಯೂ ಅತ್ಯುತ್ತಮ ಬಾಂಧವ್ಯವನ್ನು ಮುಂದುವರೆಸುವ ಬಗ್ಗೆ ನಾವು ಆಶಿಸುತ್ತೇವೆ”.ಭಾರತ ಮತ್ತು ಅಮೆರಿಕ ನಡುವೆ ಉತ್ತಮ ಆರ್ಥಿಕ ವ್ಯವಹಾರ ಇದೆ. ಭಾರತವು ಪೆಸಿಫಿಕ್ ಕ್ವಾಡ್ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ” ಎಂದು ಅವರು ಹೇಳಿದರು.